SOCIETY

ವಿಶ್ವಕಲಾ ಟ್ರಸ್ಟ್ ರವರ ನ್ಯಾಷನಲ್ ಅಕಾಡಮಿ ಆಫ್ ಸಿನೆಮಾ ಅಂಡ್ ಟೆಲಿವಿಷನ್ ಸಂಸ್ಥೆಯು ಸಿನೆಮಾ ಮತ್ತು ಟೆಲಿವಿಷನ್ ತರಬೇತಿ ನೀಡುವುದರ ಜೊತೆಗೆ ಸಿನೆಮಾ ಆಸಕ್ತಿ ಉಳ್ಳ ಜನರಿಗಾಗಿ ಸಿನೆಮಾ ಸೊಸೈಟಿ ಅನ್ನು ಪ್ರಾರಂಭಿಸಿದೆ ಈ ಸಿನೆಮಾ ಸೊಸೈಟಿಯ ಮೂಲ ಉದ್ದೇಶ,ನೀತಿ ನಿಯಮ ಮತ್ತು ಪ್ರಯೋಜನಗಳು

    ಉದ್ದೇಶ ಮತ್ತು ಪ್ರಯೋಜನಗಳು

  • ಸಿನೆಮಾಸಕ್ತಿ ಉಳ್ಳ ಗೆಳೆಯರನ್ನು ಒಟ್ಟುಗೂಡಿಸುವುದು.
  • ಸಿನೆಮಾ ಮತ್ತು ಟಿವಿ ಮಾದ್ಯಮಕ್ಕೆ ಸಂಬಂಧಪಟ್ಟ ವಿಚಾರ ಸಂಕೀರ್ಣ ಮತ್ತು ವಿಚಾರ ವಿನಿಮಯ ಮಾಡಿಕೊಳ್ಳಲು.
  • ಕನ್ನಡ ಸಿನೆಮಾಗಳನ್ನು ಉತ್ತಮ ರೀತಿಯಲ್ಲಿ ತಯಾರಿಸಲು ಕಾರ್ಯಗಾರ ಮಾಡುವುದು.
  • ಪ್ರಶಸ್ತಿ ಪಡೆದಿರುವ ಕನ್ನಡ ಚಲನಚಿತ್ರಗಳನ್ನು ನಮ್ಮ ಸಂಸ್ಥೆಯ ಚಲನಚಿತ್ರ ಮಂದಿರದಲ್ಲಿ ನೋಡುವುದು ಮತ್ತು ಆ ಚಲನಚಿತ್ರದ ಕಲಾವಿದರು ಮತ್ತು ತಂತ್ರಜ್ಞರೊಡನೆ ಸಿನೆಮಾದ ಬಗ್ಗೆ ಚರ್ಚಿಸುವುದು.
  • ಪ್ರಪಂಚದ ಎಲ್ಲಾ ಭಾಷೆಯ ಚಲನಚಿತ್ರಗಳನ್ನು ನಮ್ಮ ಸಂಸ್ಥೆಯ ಸಿನೆಮಾ ಥಿಯೇಟರ್ ನಲ್ಲಿ ನೋಡುವುದು ಮತ್ತು ನೋಡಿದ ಸಿನೆಮಾದ ಬಗ್ಗೆ ಚರ್ಚಿಸುವುದು.
  • ನಮ್ಮ ಎನ್ ಎ ಸಿ ಟಿ ಸಂಸ್ಥೆಯಲ್ಲಿ ಸಿನೆಮಾಗೆ ಸಂಬಧಪಟ್ಟ ವಿಡಿಯೋ ಲೈಬ್ರರಿ ಹಾಗು ಉತ್ತಮ ಪುಸ್ತಕಗಳ ಲೈಬ್ರರಿ ಇದ್ದು ಸದಸ್ಯ ಸದಸ್ಯರು ಉಪಯೋಗಿಸಿಕೊಳ್ಳ ಬಹುದು.
  • ನಮ್ಮ ಸಂಸ್ಥೆಯಲ್ಲಿ ಸಿನೆಮಾ ತಯಾರಿಸಬಲ್ಲ ಉಪಕರಣಗಳಿದ್ದು ಸದಸ್ಯರುಗಳು ರಿಯಾಯಿತಿ ಈ ಕೆಳಕಂಡ ಉಪಕರಣಗಳನ್ನು ಪಡೆಯ ಬಹುದು.
    • RED Epic 4K Camera
    • Blackmagic 4K cinema Camera
    • Gopro 4K Camera
    • Panasonic GH5 4K Camera
    • Canon DSLR 4K Camera
    • VFX Studio
    • NACT 2K Cinema Theater
    • Nikon Camera
    • Dance Studio
  • ಆಡಿಯೊ ಮತ್ತು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಮಾಡಿಕೊಳ್ಳ ಬಹುದು ಸುಸಜ್ಜಿತ ಆಡಿಯೊ,ಮೈಕ್ ವ್ಯವಸ್ಥೆ ಹಾಗು ಹಾಲ್ ಸೌಲಭ್ಯ ವಿರುತ್ತದೆ.
  • 2K ಸಿನೆಮಾ ಥಿಯೆಟರ್ ಇದ್ದು ಸದಸ್ಯ ಸದಸ್ಯರು ತಮ್ಮ ಚಲನಚಿತ್ರಗಳನ್ನ (ಪ್ರಿಮಿಯರ್ ಶೋ) ರಿಯಾತಿ ದರಲ್ಲಿ ಸಿನೆಮಾ ವಿಕ್ಷಿಸ ಬಹುದು.
  • ಸದಸ್ಯ ಸದಸ್ಯರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಿಗೆ ಪ್ರವೇಶ ಪಾಸ್ ಗಳನ್ನು ರಿಯಾಯಿತಿ ದರದಲ್ಲಿ ಪಡೆಯ ಬಹುದು
  • ದೇಶ ವಿದೇಶಗಳಲ್ಲಿ ನಡೆಯುವ ಚಲನಚಿತ್ರೋತ್ಸವಗಳಲ್ಲಿ ಭಾಗಿಯಾಗುವುದಾದರೆ ಸಂಸ್ಥೆಯು ಉತ್ಸವಗಳಿಗೆ ಕಳಿಸುವ ವ್ಯವಸ್ಥೆಯನ್ನು ಮಾಡುತ್ತದೆ
  • ದೇಶ ವಿದೇಶಗಳಲ್ಲಿ ನಡೆಯುವ ಅಂತರ ರಾಷ್ಟ್ರೀಯ ಚಲನ ಚಿತ್ರೋತ್ಸವಗಳಿಗೆ ಸದಸ್ಯ ಸದಸ್ಯರುಗಳು ಚಲನಚಿತ್ರವನ್ನು ಮತ್ತು ಕಿರುಚಿತ್ರಗಳನ್ನು ನಿರ್ಮಿಸಿದ್ದರೆ ಅಂತಹ ಉತ್ಸವಗಳಿಗೆ ಚಲನಚಿತ್ರಗಳನ್ನು ಕಳಿಸುವ ವ್ಯವಸ್ಥೆಯನ್ನು ಮಾಡುತ್ತದೆ.
  • ಸದಸ್ಯ ಸದಸ್ಯರುಗಳು ತಾವುಗಳು ನಿರ್ಮಿಸಿದ ಕಿರುಚಿತ್ರಗಳನ್ನು ನಮ್ಮಯ ಸಿನೆಮಾ ಥಿಯೇಟರ್ ನಲ್ಲಿ ರಿಯಾಯಿತಿ ದರದಲ್ಲಿ ಪ್ರದರ್ಶನ ಮಾಡಬಹುದು.
  • ಸಂಸ್ಥೆಯಿಂದ ಇನ್ನು ಅನೇಕ ರೀತಿಯ ಸೌಲಭ್ಯಗಳು ಮುಂದಿನ ದಿನಗಳಲ್ಲಿ ದೊರೆಯುತ್ತದೆ

    ನೀತಿ ನಿಯಮ

  • ಸದಸ್ಯರಾಗ ಬಯಸುವ ವ್ಯಕ್ತಿಯ ವಯಸ್ಸು 18 ವರ್ಷ ತುಂಬಿರ ಬೇಕು.
  • ಈ ಸೊಸೈಟಿಗೆ ಸದಸ್ಯರಾಗಲು ಇರುವ ಶುಲ್ಕ ವಾರ್ಷಿಕ 1500/- ( ವಾರ್ಷಿಕ ನವೀಕರಣ ಶುಲ್ಕ ರೂ 500/- (ಐದು ನೂರು ರೂಪಾಯಿಗಳು).
  • ಅಜೀವ ಸದಸ್ಯತ್ವ ಶುಲ್ಕ 15000/- ( ಹದಿನೈದು ಸಾವಿರ ರೂಪಾಯಿಗಳು)
  • ಸದಸ್ಯರಾಗಲು ವ್ಯಕ್ತಿಯು ಸಿನೆಮಾಸಕ್ತಿ ಉಳ್ಳವರಾಗಿರ ಬೇಕು ಮತ್ತು ವಿದ್ಯವಂತರಾಗಿರ ಬೇಕು.
  • ಭಾರತಿಯ ಮತು ಅನಿವಾಸಿ ಭಾರತಿಯರಾಗಿರ ಬೇಕು.
  • ಸದಸ್ಯರಾಗ ಬಯಸುವ ವ್ಯಕ್ತಿಯು ಯಾವುದೆ ರೀತಿಯ ಸಮಾಜಘಾತುಕ ವ್ಯಕ್ತಿತ್ವ ಹಿನ್ನಲೆ ಇರಬಾರದು.
  • ಆಧಾರ್ ಕಾರ್ಡ್ ಮತ್ತು 4( ನಾಲ್ಕು) ಭಾವಚಿತ್ರಗಳನ್ನ ಕೊಡಬೇಕು.
  • ನಿಮ್ಮ ಸದಸ್ಯತ್ವ ನೊಂದಾವಣೆಯನ್ನು ಆನ್ ಲೈನ್ ಮೂಲಕವು ಮಾಡಬಹುದು.
  • ಸಂಸ್ಥೆಯಲ್ಲಿ ನಡೆಯುವ ಸಭೆಗಳು ಸಮಾರಂಭಗಳನ್ನು ಇ ಮೇಲ್ ಮತ್ತು ಪೊನ್ ಮೂಲಕ ತಿಳಿಸಲಾಗುವುದು.
  • ಸಂಸ್ಥೆಯ ಸಭೆ ಸಮಾರಂಭಗಳಲ್ಲಿ ಸದಸ್ಯ ಸದಸ್ಯರುಗಳು ಯಾರಾದರು ಅನುಚಿತ ವರ್ತನೆ ನಡೆಸಿದರೆ ಅಂತಹ ವ್ಯಕ್ತಿಗಳ ಸದಸ್ಯತ್ವವನ್ನು ರದ್ದುಗಳಿಸಲಾಗುವುದು.
  • ಸಂಸ್ಥೆಯ ಥಿಯೇಟರ್ ಮತ್ತು ಹಾಲ್ ಅನ್ನು ಉಪಯೋಗಿಸಲು 3 (ಮೂರು) ದಿನಗಳ ಮುಂಗಡ ತಿಳಿಸಬೇಕು.
  • ಸಂಸ್ಥೆಯಲ್ಲಿ ಸದಸ್ಯತ್ವವನ್ನು ವರ್ಗಾಹಿಸುವುದಿಲ್ಲ.
  • ಕಾಲ ಕಾಲಕ್ಕೆ ಬದಲಾಗುವ ಸರ್ಕಾರದ ನೀತಿ ನಿಯಮಗಳು ಅನ್ವಹಿಸುತ್ತವೆ.